A-   A   A+

 
 
 
 
 
 
 
 
 
 
 
 
img  
img
 
● ಟೋಕನ್‍ಗಳನ್ನು ಏಕ ಪ್ರಯಾಣ ಟಿಕೇಟ್‍ಗಳಾಗಿ ಉಪಯೋಗಿಸಲಾಗುತದೆ.

● ಇವುಗಳನ್ನು ನಿರ್ಗಮನ ವೇಳೆಯಲ್ಲಿ ದ್ವಾರಗಳಲ್ಲಿ ವಶಪಡಿಸಿಕೊಳ್ಳಲಾಗುತ್ತದೆ..

● ಇವು ಸಾಂದರ್ಭಿಕ ಪ್ರಯಾಣಿಕರಿಗೆ ಸೂಕ್ತ

 


ಟೋಕನ್‍ಗಳಿಗಾಗಿ ನಿಯಮಗಳು:

● ಒoದು ಬಾರಿಗೆ ಒಬ್ಬ ಪ್ರಯಾಣಿಕನಿಗೆ ಟಿಕೇಟ್ ಕಚೇರಿ ನಿರ್ವಾಹಕನು ನೀಡಬೇಕಾದ ಗರಿಷ್ಟ ಸಂಖ್ಯೆಯ ಟೋಕನ್‍ಗಳು ಆರು.

● ಪ್ರಯಾಣ ಪೂರ್ಣಗೊಂಡ ನಚಿತರ ನಿರ್ಗಮನ ದ್ವಾರದ ಬಳಿ ಟೋಕನ್‍ಗಳನ್ನು ವಶಪಡಿಸಿಕೊಳ್ಳಲಾಗುತ್ತದೆ.

● ಟೋಕನ್‍ನ ಸಿಂಧುತ್ವದ ಅವಧಿ:

● ಯಾವುದೇ ವಿಧದ ಟೋಕನ್ ಖರೀದಿಸಿದ ದಿನಕ್ಕೆ ಮಾತ್ರ ಸಿಂಧುವಾಗಿರುತ್ತದೆ.

● ಮಾರಾಟ ಮಾಡಿದ ಸಮಯದಿಂದ 30 ನಿಮಿಷಗಿಂತ ಹೆಚ್ಚಿರದ ಅವಧಿಗೆ ಪ್ರವೇಶ ದ್ವಾರದಲ್ಲಿ ಬಳಕೆಗೆ ಇದು ಸಿಂಧುವಾಗಿರುತ್ತದೆ.

● ಟೋಕನ್ ಮಾರಾಟ ನಿಲ್ದಾಣವು ಪ್ರಯಾಣಕ್ಕೆ ಪ್ರವೇಶ ನಿಲ್ದಾಣವಾಗಿರತಕ್ಕದ್ದು.

● ಅವಧಿ ಮೀರಿ ಉಳಿಯುವಿಕೆ ಕುರಿತು ನಿಯಮ: ಸಿಂಧುವಾದ ಟಿಕೇಟನ್ನು ಹೊಂದಿರುವ ಪ್ರಯಾಣಿಕನು ಅದೇ ನಿಲ್ದಾಣದಲ್ಲಿ 20 ನಿಮಿಷಗಳೊಳಗೆ ಮತ್ತು ಇತರ ನಿಲ್ದಾಣಗಳಿಂದ 120 ನಿಮಿಷಗಳೊಳಗೆ ನಿರ್ಗಮಿಸಬಹುದಾಗಿದೆ. ಈ ಕಾಲಾವಧಿಗಳನ್ನು ಮೀರಿ ನಮ್ಮ ಮೆಟ್ರೋದ ಸಚಿದಾಯಿತ ಪ್ರದೇಶದಲ್ಲಿ ಉಳಿದುಕೊಳ್ಳುವುದಕ್ಕಾಗಿ ಗರಿಷ್ಟ 50.00 ರೂ.ಗಳಿಗೆ ಒಳಪಟ್ಟು ಪ್ರತಿ ಗಂಟೆಗೆ 10.00 ರೂ.ಗಳ ದಂಡವನ್ನು ವಿಧಿಸಲಾಗುತ್ತದೆ.

● ಪ್ರಯಾಣಿಕನು ನಿರ್ಗಮನ ದ್ವಾರದಲ್ಲಿ ಟೋಕನ್‍ಅನ್ನು ಠೇವಣಿ ಮಾಡದೆ ತೆಗೆದುಕೊಂಡು ಹೋದರೆ 200.00 ರೂ.ಗಳ ದಂಡವನ್ನು ವಿಧಿಸಲಾಗುತ್ತದೆ.

 

 
 
img img img
imgimg img img img img