A-   A   A+

 
 
 
 
 
 
 
 
 
 
 
 
 
 
 
ಟಿಕೆಟ್ ಗಳು  
img
  ನಮ್ಮ ಮೆಟ್ರೋದಲ್ಲಿ ಬಳಸಲಾಗುವ ಟಿಕೇಟ್ ಮಾಧ್ಯಮವು ಪ್ರಮುಖವಾಗಿ ಸ್ಪರ್ಶರಹಿತ (ಕಾಂಟ್ಯಾಕ್ಟ್‍ಲೆಸ್) ತಂತ್ರಜ್ಞಾನವಾಗಿದೆ. ಅವುಗಳೆಂದರೆ:
  • ಟೋಕನ್‍ಗಳು (ಒಂದೇ ಪ್ರಯಾಣಕ್ಕಾಗಿ)
  • ಕಾಂಟ್ಯಾಕ್ಟ್‍ಲೆಸ್ ಸ್ಮಾರ್ಟ್‍ಕಾರ್ಡ್‍ಗಳು (ಬಹು ಪ್ರಯಾಣಗಳಿಗಾಗಿ)
ಸ್ಮಾರ್ಡ್‍ಕಾರ್ಡ್ ಒಳಗಿರುವ ಇಲೆಕ್ಟ್ರಾನಿಕ್ ಚಿಪ್ ಟಿಕೇಟಿನ ಮಾಹಿತಿ.
 
   
  ಟೋಕನ್‍ಗಳು  
 
   

● ಟೋಕನ್‍ಗಳನ್ನು ಒಂದೇ ಪ್ರಯಾಣದ ಟಿಕೇಟುಗಳಾಗಿ ಬಳಸಲಾಗುತ್ತದೆ.

● ಇವುಗಳನ್ನು ನಿರ್ಗಮನ ಅವಧಿಯಲ್ಲಿ ದ್ವಾರಗಳಲ್ಲಿ ವಶಪಡಿಸಿಕೊಳ್ಳಲಾಗುತ್ತದೆ.

● ಇವು ಸಾಂದರ್ಭಿಕ ಪ್ರಯಾಣಿಕರಿಗೆ ಸೂಕ್ತ.

 
  ಕಾಂಟ್ಯಾಕ್ಟ್‍ಲೆಸ್ ಸ್ಮಾರ್ಟ್‍ಕಾರ್ಡ್‍ಗಳು  
 
 

ನಮ್ಮ ಮೆಟ್ರೋ ಪ್ರಯಾಣ ಕಾರ್ಡುಗಳು

ಕಾಂಟ್ಯಾಕ್ಟ್‍ಲೆಸ್ ಸ್ಮಾರ್ಟ್‍ಕಾರ್ಡ್‍ಗಳು 50.00 ರೂ.ಗಳಿಗೆ ದೊರಕುತ್ತವೆ. ಪ್ರಯಾಣ ಮೌಲ್ಯವು ಕಾರ್ಡಿನ ದರದಿಂದ ವ್ಯತ್ಯಾಸವಾಗಿರುತ್ತದೆ.

 
     
 
 
     
 
 


ಸ್ಮಾರ್ಟ್‍ಕಾರ್ಡ್‍ಗಳಲ್ಲಿ ಲೋಡ್ ಮಾಡಬಹುದಾದಂಥ ಸ್ಟ್ಯಾಂಡರ್ಡ್ ಟಿಕೇಟ್‍ಗಳು:

ಸಂಗ್ರಹಿತ ಮೌಲ್ಯ ಟಿಕೇಟುಗಳು (ವಾರ್ಷಿಕ):

● ಬಹು ಪ್ರಯಾಣಗಳನ್ನು ಕೈಗೊಳ್ಳುವುದಕ್ಕಾಗಿ ಇವುಗಳನ್ನು ಬಳಸಾಗುತ್ತದೆ.

● ಬಳಕೆದಾರನು 50.00 ರೂ.ಗಳ ಅಪವತ್ರ್ಯಗಳಲ್ಲಿ ಗರಿಷ್ಟ 1500 ರೂ.ಗಳವರೆಗೆ ಹಣವನ್ನು ಕಾರ್ಡಿಗೆ ಲೋಡ್ ಮಾಡಬಹುದು.

● ಟಿಕೇಟಿನಲ್ಲಿನ ಸಂಗ್ರಹಿತ ಮೌಲ್ಯವು ನಿರ್ವಹಿಸಲಾದ ಪ್ರಯಾಣಗಳ ವ್ಯಾಪ್ತಿಗನುಗುಣವಾಗಿ ಕಡಿಮೆಹಾಗುತ್ತದೆ.

● ವಾರ್ಷಿಕ ದರದಲ್ಲಿ ಟೋಕನ್ ದರದ ಶೇಕಡ 15ರವರೆಗೆ ರಿಯಾಯಿತಿ ನೀಡಲಾಗುತ್ತದೆ.


 

ಸಂಚಾರ ಟಿಕೇಟ್ (ಸಂಚಾರ)

● ಇದನ್ನು ಬಹುವಿಧವಾದ ಪ್ರಯಾಣ ಕೈಗೊಳ್ಳಲು ಬಳಸಬಹುದಾಗಿದೆ ಮತ್ತು ನಿಯತ ಪ್ರಯಾಣಿಕರು ಎರಡು ನಿಗದಿತ ನಿಲ್ದಾಣಗಳ ನಡುವೆ ಪ್ರಯಾಣಿಸಲು ವಿಶೇಷವಾಗಿ ರೂಪಿತವಾಗಿದೆ.

● ಒಂದು ನಿಲ್ದಾಣದಿಂದ ತಲುಪಬೇಕಾದ ನಿಲ್ದಾಣಕ್ಕೆ ಕೈಗೊಳ್ಳುವ ಏಕ ಪ್ರಯಾಣವೇ ಒಂದು ಸಂಚಾರ.

● ದರ ವಲಯದೊಳಗಿನ ಪ್ರಯಾಣಕ್ಕಾಗಿ ಕಾರ್ಡಿನೊಳಗೆ ಸಂಚಾರಗಳ ಗುಚ್ಚವನ್ನು ಎಂದರೆ 10, 40, 50 ಅಥವಾ 100 ಸಂಚಾರಗಳ ಗುಚ್ಚವನ್ನು ಲೋಡ್ ಮಾಡಬಹುದಾಗಿದೆ.

● ಸಂಚಾರ್ ದರದಲ್ಲಿ ವಾರ್ಷಿಕ ದರದ ಶೇಕಡ 10ರವರೆಗೆ ರಿಯಾಯಿತಿ ನೀಡಲಾಗುತ್ತದೆ. ಸಂಚಾರ್ ಟಿಕೇಟ್ ಗಳಲ್ಲಿ ವಾರ್ಷಿಕ ಟಿಕೇಟನ್ನು ಸಹ ಲೋಡ್ ಮಾಡಬಹುದಾಗಿದ್ದು, ಅಂಥ ಸಂದರ್ಭಗಳಲ್ಲಿ ಪ್ರಯಾಣದ ಅವಧಿಯಲ್ಲಿ ವಿಧಿಸಬಹುದಾದ ದರವು ಎರಡರಲ್ಲಿ ಯಾವುದು ಕಡಿಮೆ ಇರುತ್ತದೆಯೋ ಅದಾಗಿರುತ್ತದೆ.

 
   
     
     
 
 
img img img
img img img imgimg img