A-   A   A+

 
img
img
img
img
 
 
 
 
img  
img
img
 
 

ನಮ್ಮ ಮೆಟ್ರೋದ ಹಂತ1 ಜಾಲವು ಎರಡು ಕಾರಿಡಾರ್‍ಗಳನ್ನು ಎಂದರೆ ಪೂರ್ವಪಶ್ಚಿಮ ಮತ್ತು ಉತ್ತರ ದಕ್ಷಿಣ ಕಾರಿಡಾರ್‍ಗಳನ್ನು ಒಳಗೊಂಡಿದೆ.

ಪೂರ್ವಪಶ್ಚಿಮ ಕಾರಿಡಾರ್‍ಗೆ ನೇರಳೆ ಮಾರ್ಗ (ಪರ್ಪಲ್ ಲೈನ್) ಎಂದು ಹೆಸರಿಸಲಾಗಿದೆ

ಉತ್ತರದಕ್ಷಿಣ ಕಾರಿಡಾರಿಗೆ ಹಸಿರು ಮಾರ್ಗ (ಗ್ರೀನ್ ಲೈನ್) ಎಂದು ಹೆಸರಿಸಲಾಗಿದೆ

ಎರಡು ಕಾರಿಡಾರುಗಳು ಕೆಂಪೇಗೌಡ ನಿಲ್ದಾಣದಲ್ಲಿ ಸಂಧಿಸಲಿವೆ ಮತ್ತು ಕೆಂಪೇಗೌಡ ನಿಲ್ದಾಣವು ಎರಡು ಹಂತದ ಇಂಟರ್‍ಚೇಂಜ್‍ನಿಲ್ದಾಣವಾಗಿದೆ. ಒಂದು ಮಾರ್ಗದ ನಿಲ್ದಾಣದಿಂದ (ನೇರಳೆ ಮಾರ್ಗದಲ್ಲಿನ ಟ್ರಿನಿಟಿ ಎಂದಿಟ್ಟುಕೊಳ್ಳಿ) ಇನ್ನೊಂದು ಮಾರ್ಗದ ನಿಲ್ದಾಣಕ್ಕೆ (ಹಸಿರು ಮಾರ್ಗದ ಪೀಣ್ಯ ಎಂದಿಟ್ಟುಕೊಳ್ಳಿ) ಪ್ರಯಾಣಿಸಲು ಉದ್ದೇಶಿಸಿರುವ ಪ್ರಯಾಣಿಕನು ಸಂದಾಯಿತ ಪ್ರದೇಶದಿಂದ ಹೊರಗೆ ಬಾರದೆ ಕೆಂಪೇಗೌಡ ನಿಲ್ದಾಣದಲ್ಲಿ ರೈಲನ್ನು ಬದಲಾಯಿಸಬೇಕಾಗುತ್ತದೆ. ಪ್ರಯಾಣಿಕನು ಇಡೀ ಪ್ರಯಾಣಕ್ಕಾಗಿ ಒಂದೇ ಟಿಕೇಟನ್ನು ಖರೀದಿಸಬಹುದು.


ಉತ್ತರದಕ್ಷಿಣ ಕಾರಿಡಾರ್‍ಅನ್ನು ಹಸಿರು ಮಾರ್ಗ ಎಂದು ಹೆಸರಿಸಲಾಗಿದೆ

  ಪೂರ್ವಪಶ್ಚಿಮ ಕಾರಿಡಾರ್‍ಅನ್ನು ನೇರಳೆ ಮಾರ್ಗ ಎಂದು ಹೆಸರಿಸಲಾಗಿದೆ
ಹಸಿರು ಮಾರ್ಗದ ನಿಲ್ದಾಣಗಳು
1 ನಾಗಸಂದ್ರ
2 ದಾಸರಹಳ್ಳಿ
3 ಜಾಲಹಳ್ಳಿ
4 ಪೀಣ್ಯ ಕೈಗಾರಿಕಾ ಪ್ರದೇಶ
5 ಪೀಣ್ಯ
6 ಯಶವಂತಪುರ ಕೈಗಾರಿಕಾ ಪ್ರದೇಶ
7 ಯಶವಂತಪುರ
8 ಸ್ಯಾಂಡಲ್ ಸೋಪ್ ಫ್ಯಾಕ್ಟರಿ
9 ಮಹಾಲಕ್ಷ್ಮಿಪುರಂ
10 ರಾಜಾಜಿನಗರ
11 ಕುವೆಂಪು ರಸ್ತೆ
12 ಶ್ರೀರಾಂಪುರ
ಹಸಿರು ಮಾರ್ಗದ ನಿಲ್ದಾಣಗಳು
14 ಮಂತ್ರಿ ಸ್ಕ್ವೇರ್ ಸಂಪಿಗೆ ರಸ್ತೆ
15 ಕೆಂಪೇಗೌಡ ಬಸ್ ನಿಲ್ದಾಣ
16 ಚಿಕ್ಕಪೇಟೆ
17 ಕೃಷ್ಣರಾಜೇಂದ್ರ ಮಾರುಕಟ್ಟೆ
18 ನ್ಯಾಷನಲ್ ಕಾಲೇಜ್ ರಸ್ತೆ
19 ಲಾಲ್‍ಬಾಗ್
20 ಸೌತ್ ಎಂಡ್ ಸರ್ಕಲ್
21 ಜಯನಗರ
22 ರಾಷ್ಟ್ರೀಯ
23 ಬನಶಂಕರಿ
24 ಜಯಪ್ರಕಾಶ್ ನಗರ
25 ಪುಟ್ಟೇನಹಳ್ಳಿ
 
ನೇರಳೆ ಮಾರ್ಗದ ನಿಲ್ದಾಣಗಳು
1 ಬೈಯಪ್ಪನಹಳ್ಳಿ
2 ಸ್ವಾಮಿ ವಿವೇಕಾನಂದ ರಸ್ತೆ
3 ಇಂದಿರಾನಗರ
4 ಹಲಸೂರು
5 ಟ್ರಿನಿಟಿ
6 ಮಹಾತ್ಮ ಗಾಂಧಿ ರಸ್ತೆ
7 ಕಬ್ಬನ್ ಉದ್ಯಾನ
8 ವಿಧಾನ ಸೌಧ
9 ಸರ್ ಎಂ.ವಿಶ್ವೇಶ್ವರಯ್ಯ
10 ಕೆಂಪೇಗೌಡ ಬಸ್ ನಿಲ್ದಾಣ
11 ನಗರ ರೈಲು ನಿಲ್ದಾಣ
12 ಮಾಗಡಿ ರಸ್ತೆ
 
ನೇರಳೆ ಮಾರ್ಗದ ನಿಲ್ದಾಣಗಳು
13 ಹೊಸಹಳ್ಳಿ
14 ವಿಜಯನಗರ
15 ಅತ್ತಿಗುಪ್ಪೆ
16 ದೀಪಾಂಜಲಿ ನಗರ
17 ಮೈಸೂರು ರಸ್ತೆ
   

  ರೀಚ್‍ಗಳು:


ಯೋಜನೆಯ ಅನುಷ್ಥಾನಕ್ಕಾಗಿ, ರೀಚ್‍ಗಳು ಎಂದು ಕರೆಯಲಾಗುವ ನಾಲ್ಕು ಎತ್ತರಿಸಿದ ಸಂಪರ್ಕ ಮಾರ್ಗಗಳನ್ನು ಯೋಜನಾ ಅನುಷ್ಥಾನದ ಅನುಕೂಲಕ್ಕಾಗಿ ಈ ಕೆಳಗಿನಂತೆ ಗುರುತಿಸಲಾಗಿದೆ. ಅಲ್ಲದೆ, ಕ್ರಮವಾಗಿ ಪೂರ್ವಪಶ್ಚಿಮ ಕಾರಿಡಾರಿನಲ್ಲಿ ರೀಚ್1 ಮತ್ತು ರೀಚ್2 ಹಾಗೂ ಉತ್ತರದಕ್ಷಿಣ ಕಾರಿಡಾರಿನಲ್ಲಿ ರೀಚ್3 ಮತ್ತು ರೀಚ್4 ಇವುಗಳನ್ನು ಸಂಪರ್ಕಿಸುವ ಎರಡು ನೆಲಮಟ್ಟದ ವಿಭಾಗಗಳಿವೆ. ಗುತ್ತಿಗೆ ಮತ್ತು ಯೋಜನಾ ಮೇಲ್ವಿಚಾರಣೆಯ ಆಡಳಿತಾತ್ಮಕ ಉದ್ದೇಶಕ್ಕಾಗಿ ಪ್ರತಿಯೊಂದು ರೀಚ್ ಪ್ರತ್ಯೇಕ ಘಟಕಗಳನ್ನು ಹೊಂದಿರುತ್ತವೆ.

 
ವಿಭಾಗ ಪಥ ಮಾರ್ಗ
ರೀಚ್1 ಪೂರ್ವ ಪಥ ಕ್ರಿಕೆಟ್ ಮೈದಾನದಿಂದ ಬೈಯಪ್ಪನಹಳ್ಳಿ (6.7 ಕಿ.ಮೀ)
ರೀಚ್2 ಪಶ್ಚಿಮ ಪಥ ಕುಷ್ಟರೋಗ ಆಸ್ಪತ್ರೆಯಿಂದ ಮೈಸೂರು ರಸ್ತೆ (6.4 ಕಿ.ಮೀ)
ರೀಚ್3 ಉತ್ತರ ಪಥ ಸಂಪಿಗೆ ರಸ್ತೆಯಿಂದ ಯಶವಂತಪುರ ( 5.1 ಕಿ.ಮೀ)
ರೀಚ್3ಎ ಮೊದಲನೇ ಉತ್ತರ ವಿಸ್ತರಣೆ ಪಥ ಯಶವಂತಪುರದಿಂದ ಪೀಣ್ಯ ಕೈಗಾರಿಕಾ ಪ್ರದೇಶ (4.8 ಕಿ.ಮೀ)
ರೀಚ್3ಬಿ ಎರಡನೇ ಉತ್ತರ ವಿಸ್ತರಣೆ ಪಥ ಪೀಣ್ಯ ಕೈಗಾರಿಕಾ ಪ್ರದೇಶದಿಂದ ನಾಗಸಂದ್ರ (2.5 ಕಿ.ಮೀ)
ರೀಚ್4 ದಕ್ಷಿಣ ಮಾರ್ಗ ನ್ಯಾಷನಲ್ ಕಾಲೇಜಿನಿಂದ ರಾಷ್ಟ್ರೀಯ ವಿದ್ಯಾಲಯ ರಸ್ತೆ (4.1 ಕಿ.ಮೀ)
ರೀಚ್4ಎ ದಕ್ಷಿಣ ವಿಸ್ತರಣೆ ಪಥ ರಾಷ್ಟ್ರೀ ವಿದ್ಯಾಲಯ ರಸ್ತೆಯಿಂದ ಪುಟ್ಟೇನಹಳ್ಳಿ (3.9 ಕಿ.ಮೀ)
ಯುಜಿ 1 ಉತ್ತರದಕ್ಷಿಣ ನೆಲಮಟ್ಟದಪಥ ಸಂಪಿಗೆ ರಸ್ತೆ ಮತ್ತು ನ್ಯಾಷನಲ್ ಕಾಲೇಜ್ ಮಧ್ಯೆ (4.0 ಕಿ.ಮೀ)
ಯುಜಿ 2 ಪೂರ್ವಪಶ್ಚಿಮ ನೆಲಮಟ್ಟದಪಥ ಕ್ರಿಕೆಟ್ ಮೈದಾನ ಮತ್ತು ಮಾಗಡಿ ರಸ್ತೆ ಮಧ್ಯೆ (4.8 ಕಿ.ಮೀ)

 

 
 
img img img
img img img imgimg img img img