A-   A   A+

img
img
img
img
 
 
 
 
 
 
 
 
 
 
 
 
 
 
ದರ ನಿಯಮಗಳು  
 
  • 3 ಅಡಿಗಿಂತ ಕಡಿಮೆ ಎತ್ತರ ಇರುವ ಮಕ್ಕಳಿಗೆ ಟಿಕೇಟುಗಳನ್ನು ಪಡೆಯುವ ಅಗತ್ಯವಿರುವುದಿಲ್ಲ. ಯಾವುದೇ ವಯಸ್ಸಿನ ಮಾನದಂಡವನ್ನು ಪರಿಗಣಿಸುವುದಿಲ್ಲ.
  • ಸ್ವಯಂಚಾಲಿತ ದ್ವಾರವು ಒಂದು ಬಾರಿಗೆ ಒಬ್ಬರಿಗೆ ಪ್ರವೇಶಿಸಲು ಅವಕಾಶ ಮಾಡಿಕೊಡುತ್ತದೆ. ಆದ್ದರಿಂದ ಪ್ರತಿಯೊಬ್ಬ ಪ್ರಯಾಣಿಕನು ಒಂದು ಟೋಕನ್ ಅಥವಾ ಸ್ಮಾರ್ಟ್‍ಕಾರ್ಡನ್ನು ಒಯ್ಯುವ ಅವಶ್ಯಕತೆಯಿದೆ.
  • ನಿಲ್ದಾಣದೊಳಗೆ ಪ್ರವೇಶಿಸಲು ಕನಿಷ್ಠ ದರವನ್ನು ವಿಧಿಸಲಾಗುತ್ತದೆ.
  • ಟಿಕೇಟ್‍ರಹಿತ ಪ್ರಯಾಣ ಅಥವಾ ಟಿಕೇಟ್ ಕಳೆದುಕೊಂಡಿದ್ದಕ್ಕಾಗಿ ವಿಧಿಸಲಾಗುವ ದಂಡ ಗರಿಷ್ಟ ಟೋಕನ್ ದರದ ಜೊತೆಗೆ 50.00 ರೂ.ಗಳಾಗಿರುತ್ತದೆ.
  • ಹೊಂದಾಣಿಕೆಯಾಗದಿರುವುದು: ಸ್ವಯಂಚಾಲಿತ ದ್ವಾರವು ಪ್ರವೇಶ/ನಿರ್ಗಮನದ ವಿವರಗಳನ್ನು ಟೋಕನ್‍ನಲ್ಲಿ/ಸ್ಮಾರ್ಟ್‍ಕಾರ್ಡಿನಲ್ಲಿ ದಾಖಲಿಸುತ್ತದೆ. ಈ ದ್ವಾರಗಳಲ್ಲಿನ ಪ್ರತಿಯೊಂದು ಪ್ರವೇಶವು ಅದೇ ದಿನದಂದು ಗೇಟುಗಳ ಮೂಲಕ ಸೂಕ್ತ ನಿರ್ಗಮನವನ್ನು ಹೊಂದಿರಬೇಕು. ಯಾವುದೇ ಪ್ರವೇಶ ಅಥವಾ ನಿರ್ಗಮನ ಬಿಟ್ಟುಹೋಗಿದ್ದರೆ, ಅದನ್ನು ಹೊಂದಾಣಿಕೆಯಾಗದಿರುವುದು ಎಂಬುದಾಗಿ ಪರಿಗಣಿಸಲಾಗುತ್ತದೆ. ಹೊಂದಾಣಿಕೆ ಯಾಗದಿರುವುದಕ್ಕಾಗಿ ದಂಡವು 10.00 ರೂ.ಗಳಾಗಿರುತ್ತದೆ.
  • ಅವಧಿ ಮೀರಿ ಉಳಿಯುವಿಕೆ ಕುರಿತು ನಿಯಮ: ಸಿಂಧುವಾದ ಟಿಕೇಟನ್ನು ಹೊಂದಿರುವ ಪ್ರಯಾಣಿಕನು ಅದೇ ನಿಲ್ದಾಣದಲ್ಲಿ 20 ನಿಮಿಷಗಳೊಳಗೆ ಮತ್ತು ಇತರ ನಿಲ್ದಾಣಗಳಿಂದ 120 ನಿಮಿಷಗಳೊಳಗೆ ನಿರ್ಗಮಿಸಬಹುದಾಗಿದೆ. ಈ ಕಾಲಾವಧಿಗಳನ್ನು ಮೀರಿ ನಮ್ಮ ಮೆಟ್ರೋದ ಸಂದಾಯಿತ ಪ್ರದೇಶದಲ್ಲಿ ಉಳಿದರೆ ಅದಕ್ಕೆ ಗರಿಷ್ಟ 50.00 ರೂ.ಗಳಿಗೆ ಒಳಪಟ್ಟು ಪ್ರತಿ ಗಂಟೆಗೆ 10.00 ರೂ.ಗಳ ದಂಡವನ್ನು ವಿಧಿಸಲಾಗುತ್ತದೆ.
 
 
img img img
img img img